Revelation 21:18

ಆ ಗೋಡೆಯ ಕಟ್ಟಡವು ಸೂರ್ಯ ಕಾಂತದಿಂದ ಆಗಿತ್ತು; ಪಟ್ಟಣವು ಶುದ್ಧ ಗಾಜಿನಂತಿರುವ ಸೋಸಿದ ಭಂಗಾರವೇ.

Revelation 21:17

ಅದರ ಗೋಡೆಯನ್ನು ಅವನು ಅಳತೆ ಮಾಡಿದನು; ಅದು ನೂರನಾಲ್ವತ್ತ ನಾಲ್ಕು ಮೊಳ ದಷ್ಟಿತ್ತು. ಈ ಲೆಕ್ಕದಲ್ಲಿ ಮನುಷ್ಯನ ಮೊಳ ಅಂದರೆ ದೂತನ ಮೊಳ.

Revelation 21:16

ಪಟ್ಟಣವು ಚಚ್ಚೌಕವಾಗಿದೆ; ಅದರ ಉದ್ದವು ಅದರ ಅಗಲದಷ್ಟಿದೆ. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು; ಅಳತೆಯು ಹನ್ನೆರಡು ನೂರು ಮೈಲಿ ಆಯಿತು. ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿವೆ.

Revelation 21:15

ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಹೆಬ್ಬಾಗಿಲುಗಳನ್ನೂ ಗೋಡೆಯನ್ನೂ ಅಳತೆ ಮಾಡು ವದಕ್ಕಾಗಿ ಚಿನ್ನದ ಅಳತೆ ಕೋಲನ್ನು ಹಿಡಿದಿದ್ದನು.

Revelation 21:14

ಪಟ್ಟಣದ ಗೋಡೆಗೆ ಹನ್ನೆರಡು ಅಸ್ತಿವಾರಗಳಿದ್ದವು; ಅವುಗಳ ಮೇಲೆ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.

Revelation 21:13

ಪೂರ್ವ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲು ಗಳು. ಉತ್ತರ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಪಶ್ಚಿಮ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಇದ್ದವು.

Revelation 21:12

ಆ ಪಟ್ಟಣಕ್ಕೆ ಬಹಳ ಎತ್ತರವಾದ ಗೋಡೆ ಇತ್ತು; ಅದಕ್ಕೆ ಹನ್ನೆರಡು ಹೆಬ್ಬಾಗಿಲು ಗಳಿದ್ದವು; ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೂತರಿದ್ದರು; ಅವುಗಳ ಮೇಲೆ ಇಸ್ರಾ ಯೇಲ್ಯರ ಹನ್ನೆರಡು ಗೋತ್ರಗಳ ಹೆಸರುಗಳು ಬರೆ ದಿದ್ದವು.

Revelation 21:11

ಅದರಲ್ಲಿ ದೇವರ ಮಹಿಮೆ ಇತ್ತು; ಪಟ್ಟಣದ ಪ್ರಕಾಶವು ಅಮೂಲ್ಯವಾದ ಕಲ್ಲಿನ ಪ್ರಕಾಶಕ್ಕೆ ಸಮಾನವಾಗಿತ್ತು; ಅದು ಸೂರ್ಯ ಕಾಂತದಂತೆ ಥಳಥಳಿಸುತ್ತಿತ್ತು.

Revelation 21:10

ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ ಪರಲೋಕ ದೊಳಗಿಂದ ಪರಿಶುದ್ಧವಾದ ಯೆರೂಸಲೇಮೆಂಬ ಆ ದೊಡ್ಡ ಪಟ್ಟಣವು ದೇವರ ಕಡೆಯಿಂದ ಇಳಿದು ಬರುವ ದನ್ನು ನನಗೆ ತೋರಿಸಿದನು.

Revelation 21:9

ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ–ಇಲ್ಲಿಗೆ ಬಾ, ಕುರಿಮರಿಯಾದಾತನಿಗೆ ಹೆಂಡತಿಯಾಗ ತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು ಎಂದು ಹೇಳಿದನು.