Revelation 22:21

ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್‌.

Revelation 22:20

ಇವುಗಳನ್ನು ಸಾಕ್ಷೀಕರಿಸುವಾತನು–ಖಂಡಿತ ವಾಗಿ ನಾನು ಬೇಗ ಬರುತ್ತೇನೆ ಎಂದು ಹೇಳುತ್ತಾನೆ. ಆಮೆನ್‌. ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.

Revelation 22:19

ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ವಾಕ್ಯಗಳಿಂದ ತೆಗೆದು ಬಿಟ್ಟರೆ ಜೀವಗ್ರಂಥದಿಂದಲೂ ಪರಿಶುದ್ಧ ಪಟ್ಟಣ ದಿಂದಲೂ ಈ ಪುಸ್ತಕದಲ್ಲಿ ಬರೆದಿರುವವುಗಳಿಂದಲೂ ಅವನ ಪಾಲನ್ನು ದೇವರು ತೆಗೆದುಬಿಡುವನು.

Revelation 22:18

ಈ ಪುಸ್ತಕದ ಪ್ರವಾದನಾವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನಂ ದರೆ–ಯಾವನಾದರೂ ಇವುಗಳಿಗೆ ಕೂಡಿಸಿದರೆ ದೇವರು ಅವನಿಗೆ ಈ ಪುಸ್ತಕದಲ್ಲಿ ಬರೆದಿರುವ ಉಪ ದ್ರವಗಳನ್ನು ಕೂಡಿಸುವನು.

Revelation 22:17

ಆತ್ಮನೂ ಮದಲಗಿತ್ತಿಯೂ–ಬಾ, ಅನ್ನುತ್ತಾರೆ. ಕೇಳುವವನು–ಬಾ, ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.

Revelation 22:16

ಯೇಸುವೆಂಬ ನಾನು ಸಭೆಗಳಲ್ಲಿ ಇವುಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವದಕ್ಕೋಸ್ಕರ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ಬೇರೂ ಸಂತತಿಯೂ ಉದಯದ ಪ್ರಕಾಶವುಳ್ಳ ನಕ್ಷತ್ರವೂ ಆಗಿದ್ದೇನೆ.

Revelation 22:15

ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆ ಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.

Revelation 22:14

ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವರು ಧನ್ಯರು; ಅವರಿಗೆ ಜೀವವೃಕ್ಷದ ಹಕ್ಕು ಇರುವದು; ಅವರು ಹೆಬ್ಬಾಗಿಲು ಗಳಿಂದ ಆ ಪಟ್ಟಣದೊಳಕ್ಕೆ ಸೇರುವರು.

Revelation 22:13

ನಾನೇ ಅಲ್ಫಾಯೂ ಓಮೆಗವೂ ಆದಿಯೂ ಅಂತ್ಯವೂ ಮೊದಲನೆಯ ವನೂ ಕಡೆಯವನೂ ಆಗಿದ್ದೇನೆ.

Revelation 22:12

ಇಗೋ, ನಾನು ಬೇಗ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ಕೆಲಸದ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನಲ್ಲಿದೆ.